ದೇವರನ್ನು ನೀವು ನೋಡಿದ್ದೀರಾ...? ಎಂಬ ಪ್ರಶ್ನೆಗೆ ಸಿದ್ದಗಂಗಾ ಶ್ರೀಗಳು ನೀಡಿದ ಉತ್ತರವೇನು ಗೊತ್ತಾ...?
'ನಡೆದಾಡುವ ದೇವರು' ಎಂದೇ ಖ್ಯಾತರಾದ ತುಮಕೂರಿನ ಸಿದ್ದಗಂಗಾ ಶ್ರೀಗಳು ತಮ್ಮ ಇಡೀ ಬದುಕಿನ ಬಹುಭಾಗವನ್ನ ಸಮಾಜಮುಖಿ ಸೇವೆಯಲ್ಲಿಯೇ ಕಳೆದವರು. ನೊಂದವರ ಮತ್ತು ಧ್ವನಿ ಇಲ್ಲದವರ ಸೇವೆಯನ್ನ ಒಂದು ದೈವಿಕ ಕಾರ್ಯದಂತೆ ನಡೆಸಿಕೊಂಡು ಬಂದವರು. ತಮ್ಮ ಮಠದ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಅನ್ನವನ್ನ ಉಚಿತವಾಗಿ ನೀಡುತ್ತಾ, ತಾವು ನಂಬಿದ ದೈವವನ್ನು ಮಕ್ಕಳಲ್ಲಿಯೇ ಕಂಡವರು ಸಿದ್ದಗಂಗಾ ಶ್ರೀಗಳು.
ಕಳೆದ ಕೆಲವು ದಿನಗಳಿಂದ ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀಗಳು ಮತ್ತೆ ಚೇತರಿಕೆ ಕಂಡಿದ್ದಾರೆ. ೧೧೧ ವರ್ಷಗಳ ಇಳಿವಯಸ್ಸಿನಲ್ಲೂ ಸದಾ ಉತ್ಸಾಹದ ಚಿಲುವೆಯಂತೆ ಕಾಣುವ ಶ್ರೀಗಳು ಅನೇಕರಿಗೆ ಸ್ಪೂರ್ತಿ.
ಹೀಗೆ ಸದಾ ಲವಲವಿಕೆಯಿಂದ ಇರುವ ಶ್ರೀಗಳಿಗೆ ಇತ್ತೀಚೆಗೆ ಆಸ್ಪತ್ರೆಯ ಸಿಬ್ಬಂದಿ ಒಂದು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಶ್ರೀಗಳು ನೀಡಿದ ಉತ್ತರಕ್ಕೆ ಇಲ್ಲಿದ್ದವರ ಮನಸ್ಸುಗಳು ಕರಗಿ ಹೋಗಿವೆ. ಹೌದು, ರೇಲಾ ಆಸ್ಪತ್ರೆಯ ಸಿಬ್ಬಂದಿ " ಶ್ರೀಗಳೇ... ನೀವು ದೇವರನ್ನು ಎಂದಾದರೂ ನೋಡಿದ್ದೀರಾ...?" ಎಂದು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಸಮಚಿತ್ತದಿಂದ ಉತ್ತರಿಸಿದ ಶ್ರೀಗಳು " ನಮ್ಮ ಮಠದಲ್ಲಿ ಲಕ್ಷಾಂತರ ಮಕ್ಕಳಿದ್ದಾರೆ. ಅವರೇ ನನಗೆ ದೇವರಿದ್ದಂತೆ. ನನ್ನ ಮಠದ ಮಕ್ಕಳಲ್ಲಿಯೇ ನಾನು ಇದುವರೆಗೂ ನಂಬಿಕೊಂಡು ಬಂದಿರುವ ದೈವವನ್ನು ಕಂಡಿದ್ದೇನೆ." ಎಂದಿದ್ದಾರೆ
online casino login【VIP】no deposit free spins
ReplyDeleteonline casino login,【WG98.vip】⚡,no deposit dafabet free spins,nodeposit bonus 온카지노 codes,big leovegas fish slot machines online,best real money slot sites.